ದೇರಳಕಟ್ಟೆ : ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ವತಿಯಿಂದ ನಡೆದ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮಕ್ಕೆ ಸಂಸದ ಬ್ರಿಜೇಶ್ ಚೌಟ ಚಾಲನೆ ನೀಡಿದರು.

ಎಲ್ಲರ ಜೊತೆ ಗದ್ದೆಗಿಳಿದು ಆತ್ಮೀಯವಾಗಿ ಬೆರೆತು ಭತ್ತ ನಾಟಿ ಮಾಡಿದರು.

ಮಕ್ಕಳ ಜೊತೆ ಗದ್ದೆಯಲ್ಲಿ ಕೆಲ ಸಮಯ ಆಟವಾಡಿದ ಸಂಸದರು ಎಲ್ಲರ ಗಮನ ಸೆಳೆದರು.































