ಪುತ್ತೂರು: ಕುದ್ದುಪದವಿನಲ್ಲಿ ನಡೆದ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ನಿಯೋಗ ವಿಟ್ಲ ಪೊಲಿಸ್ ಠಾಣೆಗೆ ಭೇಟಿ ನೀಡಿದ್ದು. ಈ ವೇಳೆ ಆರೋಪಿಯನ್ನು ಬಂಧಿಸುವ ಭರವಸೆಯನ್ನು ಠಾಣಾಧಿಕಾರಿಗಳು ನೀಡಿರುವುದಾಗಿ ತಿಳಿದು ಬಂದಿದೆ.

ಆರೋಪಿಯನ್ನು ಶೀಘ್ರ ಬಂಧಿಸುವ ಕುರಿತು ಠಾಣಾಧಿಕಾರಿಗಳು ಭರವಸೆ ನೀಡಿರುವುದಾಗಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಮತ್ತು ವಿಟ್ಲಮುನ್ನೂರು ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರ್ ತಿಳಿಸಿದ್ದಾರೆ.

























