ಪುತ್ತೂರು : ಲಾಡ್ಜ್ ವೊಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ನೆಹರುನಗರದಲ್ಲಿ ನಡೆದಿದೆ.
ನೆಹರುನಗರದಲ್ಲಿರುವ ಲಾಡ್ಜ್ ಗೆ ದಾಳಿ ನಡೆಸಿದ ಪೊಲೀಸರು ರಿಸೆಪ್ಶನಿಸ್ಟ್ ಹಾಗೂ ಲೆಡ್ಜರ್ ಪುಸ್ತಕವನ್ನು ವಶಕ್ಕೆ ಪಡೆದಿದ್ದಾರೆ.
ಯುವಕ-ಯುವತಿಯ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೆ ರೂಮ್ ನೀಡಿದ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.



























