ಮೂಡಬಿದಿರೆ : ದನದ ತಲೆ ಹಾಗೂ ಕರುಳು ಪತ್ತೆಯಾದ ಘಟನೆ ಮೂಡಬಿದಿರೆ ತಾಲೂಕಿನ ಕಡಂದಲೆ ಬ್ರಿಡ್ಜ್ ಸಮೀಪ ನಡೆದಿದೆ.
ಇಂದು ಬೆಳಗ್ಗೆ ಕಡಂದಲೆ ಬ್ರಿಡ್ಜ್ ಸಮೀಪ ದನದ ತಲೆ ಹಾಗೂ ಕರುಳು ಪತ್ತೆಯಾಗಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಪ್ರಮುಖರು ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಶೀಘ್ರ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.



























