ವಿಟ್ಲ : ತೀಯಾ ಸ್ನೇಹ ವಾಹಿನಿ ಒಕ್ಕೂಟದ ಆಶ್ರಯದಲ್ಲಿ ತೀಯಾ ಬಂಧುಗಳಿಗಾಗಿ ಮೂಡಾಯಿಬೆಟ್ಟು ಕೃಷಿ ಗದ್ದೆಯಲ್ಲಿ ಕಂಡೊದ ಕೆಸರ್ಡ್ ಕುಸಾಲ್ದ ಗೊಬ್ಬುಲು ಮತ್ತು ಆಟಿದ ಅಟಿಲ್ದಪಂತೊ ಕಾರ್ಯಕ್ರಮ ಸಂಪನ್ನಗೊಂಡಿತು.

ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಆಚಾರ ಪಟ್ಟವರಾದ ಗೋಪಾಲ ಬೆಳ್ಚಪ್ಪಾಡ ರವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಬೊಳ್ನಾಡು ಶ್ರೀ ಭಗವತಿ ತೀಯಾ ಸಮಾಜದ ಹಾಗೂ ಮುಂಬಾಯಿ ತೀಯ ಸಮಾಜದ ಅಧ್ಯಕ್ಷ, ಕೊಡುಗೈ ದಾನಿ ಕೃಷ್ಣಯನ್ ಉಚ್ಚಿಲ್ ರವರು ದೀಪ ಪ್ರಜ್ವಲಿಸಿ ಅತಿಥಿಗಳೊಂದಿಗೆ ಗದ್ದೆಗೆ ಹಾಲೆರೆದು ಕಳಸೆಗೆ ಭತ್ತ ತುಂಬಿಸಿ ಸಾಂಕೇತಿಕ ಭತ್ತ ಬಿತ್ತನೆ ಮಾಡಿ ವೈಶಿಷ್ಟ್ಯ ಪೂರ್ಣವಾಗಿ ನೆರವೇರಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಪಾರೆ ಆಲಿ ಚಾಮುಂಡಿ ಕ್ಷೇತ್ರ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕುಮಾರ ಕುಂಬಳೆ ಅಡ್ಕ ಶ್ರೀ ಭಗವತಿ ಕ್ಷೇತ್ರದ ಕೊಡೆಕಾರ ಸತೀಶ್ ಚಿಪ್ಪಾರ್ ಬೋಲ್ನಾಡು ಶ್ರೀ ಭಗವತಿ ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯತೀಂದ್ರನಾಥ ಪುತ್ತೂರು ,ಮಹರಾಷ್ಟ್ರ ಬಿ.ಜೆ.ಪಿ.ಚುನಾವಣ ಸಹ ಪ್ರಭಾರಿ ಎಂ.ಎಲ್ .ಅಶ್ವಿನಿ ಮಂಜೇಶ್ವರ,ಬೊಳ್ನಾಡು ಶ್ರೀ ಭಗವತಿ ತೀಯ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷರಾದ ಶ್ರೀಧರ್ ಕೆ. ಕಾರ್ಯದರ್ಶಿ ಮೋನ ಪ್ಪ ಅಳಿಕೆ, ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್ ಮಾಸ್ಟರ್ ಕೇಪು ,ಭಗವತೀ ತೀಯಾ ಕಂಕಣ ಭಾಗ್ಯ ,ಶ್ರೀ ಭಗವತೀ ಸ್ವಯಂ ಸಹಾಯತಂಡ, ಶ್ರೀ ಭಗವತಿ ತೀಯಾರಕ್ಷಣಾ ವೇದಿಕೆ ಇದರ ಅಡ್ಮಿನ್ಗಳಾದ ಮೋಹನ್ ತುಂಬೆ , ಜಯಂತ್ ಮೇರಮಜಲು,ವರುಣ್ ಬೆಂಜನಪದವು,ಪ್ರಕಾಶ ಆರಿಕಾಡಿ ಮುಂತಾದವರು ಅಲ್ಲದೆ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಉಪಾಧ್ಯಕ್ಷರುಗಳಾದ ಪುರುಷೋತ್ತಮ ಕೇ ಪುಳು ,ರಂಜಿತ್ ಪುತ್ತೂರು ನಿವೃತ್ತ ಎ.ಎಸ್. ಐ .ರಾಘವ್ ಪುತ್ತೂರು ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ,ಕೋಶಾಧಿಕಾರಿ ಬಿ.ಎಮ್.ಶ್ರೀಧರ್,ಸಂಘಟನಾ ಕಾರ್ಯದರ್ಶಿ ಉಮೇಶ್ ಮುಳಿಯ,ಅಳಿಕೆ ಗ್ರಾಮ ಪಂ.ನಿಕಟಪೂರ್ವ ಅಧ್ಯಕ್ಷೆ ಶ್ರಿಮತಿ ಸರಸ್ವತಿ ಚೆಂಡುಕಳ,ಪಂಚಾಯತ್ ಸದಸ್ಯೆ ಶಾಂಭವಿ ಸುಧಾಕರ ಮಡಿಯಾಲ,ಫ್ರೌಡ ಶಾಲ ಮುಖ್ಯೋಪಧ್ಯಾಯಿನಿ ಮಾಲತಿ ದಿನೇಶ್ ಕಾನತ್ತಡ್ಕ,ನಾಗೇಶ್ ಒಡಿಯೂರು,ಉದ್ಯಮಿ ರಾಜೇಶ್ ಉಕ್ಕುಡ,ಭಗವತೀ ಬ್ಯಾಂಕಿನ ನಿವೃತ ಸಿಬ್ಬಂದಿ ಶಿವರಾಮ ವಿಟ್ಲ ವಿವಿಧ ತರವಾಡುಗಳ,ಕ್ಷೇತ್ರಗಳ,ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

.
ವಿವಿಧ ಮನರಂಜನಾ ಆಟೋಟಗಳಲ್ಲಿ ಎಲ್ಲಾ ಭಾಗದ ತೀಯಾ ಬಂಧುಗಳು ಭಾಗವಹಿಸಿದ್ದರು. 30 ಬಗೆಯ ಆಟಿಯ ತಿಂಡಿ ತಿನಿಸುಗಳನ್ನು ಮನೆಗಳಲ್ಲೆ ತಯಾರಿಸಿ ಅಟಿಲ್ದ ಪಂತೋವನ್ನು ಮಹಿಳೆಯರು ಅಂದಗಾಣಿಸಿ ಕೊಟ್ಟರು. ಸ್ನೇಹವಾಹಿನಿಯ ಮಹಿಳಾ ಘಟಕ,ಸ್ನೇಹವಾಹಿನಿಯ ಕ್ರೀಡಾಭಿಮಾನಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




























