ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುತ್ತೂರು ವತಿಯಿಂದ ಆ.16ರಂದು ಪುತ್ತೂರಿನ ಸುಭದ್ರ ಕಲಾಮಂದಿರದಲ್ಲಿ ವರಮಹಾಲಕ್ಷ್ಮೀ ವೃತಪೂಜೆ ನಡೆಯಿತು.

ಆ.16ರಂದು ಬೆಳಿಗ್ಗೆ 8 ಗಂಟೆಗೆ ಭಜನೆ, ಬೆಳಿಗ್ಗೆ 10 ಗಂಟೆಗೆ ಮಹಾಲಕ್ಷ್ಮೀ ವ್ರತ ಪೂಜೆ ಪ್ರಾರಂಭವಾಯಿತು. ಬಳಿಕ ಮಧ್ಯಾಹ್ನ 10ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.ಅನುರಾಧ ಕುರುಂಜಿ ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್, ಕಾರ್ಯದರ್ಶಿ ಜಯಲಕ್ಷ್ಮೀ ಶಗ್ರಿತ್ತಾಯ, ರೇವತಿ ರೈ ಜೇನುಗೂಡು, ನಿವೃತ್ತ ಶಿಕ್ಷಕಿ ಶಶಿಕಲಾ, ರಜತಾ ಭಟ್, ನಗರಸಭಾ ಸದಸ್ಯೆ ಶಶಿಕಲಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾರದ ಪ್ರಭು , ಪುಷ್ಪ ಆಚಾರ್ಯ, ಸುಭದ್ರ ಕಲ್ಯಾಣ ಮಂಟಪದ ಮಾಲಕಿ ರಜತಾ ಭಟ್ ರನ್ನು ಸನ್ಮಾನಿಸಲಾಯಿತು.



ಪೂಜೆ ಮಾಡಿಸಿದ್ದ ಎಲ್ಲಾ ಮಹಿಳೆಯರಿಗೆ ಸೀರೆ ವಿತರಣೆ ನಡೆಸಲಾಯಿತು. ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.




























