ಪುತ್ತೂರು : ಕೊಲ್ಕತ್ತಾದ ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರತ ವೈದ್ಯೆಯನ್ನು ಅತ್ಯಾಚಾರ ಎಸಗಿ ಅಮಾನುಷ ರೀತಿಯಲ್ಲಿ ಹತ್ಯೆಗೈದ ಘಟನೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು ಆ.17 ಮತ್ತು18 ರಂದು ಕರೆ ನೀಡಿರುವ ಪ್ರತಿಭಟನೆಗೆ ಪುತ್ತೂರು ಶಾಖೆಯು ಬೆಂಬಲ ನೀಡಿದೆ.
ಆ.17 ರಂದು ಬೆಳಗ್ಗೆ 6 ರಿಂದ ಆ.18 ಬೆಳಗ್ಗೆ 6 ಗಂಟೆಯ ತನಕ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ತುರ್ತು ಹಾಗೂ ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳ ವಿಭಾಗವನ್ನು ಮುಚ್ಚಲಾಗುವುದು.
ತುರ್ತು ಸೇವೆಗಳನ್ನು ಹೊರತು ಎಲ್ಲಾ ವೈದ್ಯಕೀಯ ಸಂಸ್ಥೆಗಳು ಮುಚ್ಚಲಿವೆ. ಆಸ್ಪತ್ರೆಗಳು, ಖಾಸಗಿ ಚಿಕಿತ್ಸಾಲಯಗಳು ಪೂರ್ಣ ಬೆಂಬಲ ನೀಡಲಿದೆ ಐಎಂಐ ಪುತ್ತೂರು ಶಾಖೆಯ ಅಧ್ಯಕ್ಷ ಡಾ.ನರಸಿಂಹ ಶರ್ಮಾ ಕಾನಾವು, ಕಾರ್ಯದರ್ಶಿ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


























