ಮಂಗಳೂರು : ನಗರದ ಧಕ್ಕೆಯಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಶಿಕ್ಷಕಿ ಶಾಹಿದಾ (47) ಮೃತಪಟ್ಟಿದ್ದಾರೆ.
ಶಾಹಿದಾ ಕಸ್ಬಾದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಬೆಳಗ್ಗೆ ಶಾಲೆಗೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಹಿನ್ನಲೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಸೋಮೇಶ್ವರ ಪಿಲಾರು ದಾರಂದಬಾಗಿಲಿನ ನಿವಾಸಿಯಾಗಿರುವ ಶಾಹಿದಾ ಉಳ್ಳಾಲ ಠಾಣೆಯ ಎಎಸ್‌ಐ ಮಹಮ್ಮದ್ ಅವರ ಪತ್ನಿ.
ಮೃತರು ಪತಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.



























