ಪುತ್ತೂರು : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವು ಸಮೀಪ ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಅಮ್ಚಿನಡ್ಕದ ಕ್ಷೌರಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಅಮ್ಚಿನಡ್ಕದಲ್ಲಿಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಟ್ನೂರು ಗ್ರಾಮದ ಕಾವು ಬಜಕುಡೇಲು ದಿ. ರಾಮ ಭಂಡಾರಿ ಅವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ (45) ಮೃತರು.
ಸುರೇಶ್ ಭಂಡಾರಿ ನಿನ್ನೆ ಬೆಳಗ್ಗೆ ಬೈಕ್‌ನಲ್ಲಿ ಅಮ್ಚಿನಡ್ಕದ ಸೆಲೂನ್ ಅಂಗಡಿಗೆ ತೆರಳುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಕಾವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬರುತಿದ್ದ ಪಿಕಪ್ ನಡುವೆ ಅಪಾಘತ ಸಂಭವಿಸಿದೆ.


























