ಪುಂಜಾಲಕಟ್ಟೆ : ಬೊಳ್ಳಿಮಾರು ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದಿಂದ ಕಾಣಿಕೆ ಡಬ್ಬಿ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷೇತ್ರದ ಧರ್ಮದರ್ಶಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಬೊಳ್ಳಿಮಾರು ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಕಾಣಿಕೆ ಹಾಕಲು ಇಡಲಾಗಿದ್ದ ಮೂರು ಸ್ಟೀಲ್ನ ಕಾಣಿಕೆ ಡಬ್ಬಿಗಳನ್ನು ಆ.17ರ ರಾತ್ರಿಯಿಂದ ಆ.18ರ ಬೆಳಿಗ್ಗಿನ ಮಧ್ಯದ ಅವಧಿಯಲ್ಲಿ ಕಳ್ಳರು ದೇವಸ್ಥಾನಕ್ಕೆ ಬಂದು ದೇವಸ್ಥಾನಕ್ಕೆ ಅಳವಡಿಸಿದ ಸಿಸಿ ಕ್ಯಾಮರಗಳನ್ನು ಹಾಳು ಮಾಡಿ, ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10000/- ಹಣ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಡಿವಿಆರ್ ಅಂದಾಜು ಮೌಲ್ಯ ರೂ 8000/- ಆಗಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 65-2024 US 331(4), 305, 324(4) BNS Act-2023 ರಂತೆ ಪ್ರಕರಣ ದಾಖಲಾಗಿದೆ.