ಪುತ್ತೂರು : ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಆ.20 ರ ಬೆಳಗ್ಗಿನ ಜಾವ ನಡೆದಿದೆ.
ಕುಂಬ್ರ ಪೆಟ್ರೋಲ್ ಪಂಪ್ ನ ಮ್ಯಾನೇಜರ್ ಧನುಷ್ ಗಾಯಗೊಂಡ ಯುವಕ.
ಧನುಷ್ ಎಂದಿನಂತೆ ಬೆಳಿಗ್ಗೆ ಸ್ಕೂಟರ್ ನಲ್ಲಿ ಕುಂಬ್ರ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದ ವೇಳೆ ಏಕಾ ಏಕಿ ಕಾಡು ಹಂದಿಯೊಂದು ಸ್ಕೂಟರ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್ ಮೇಲೆ ಎರಗಿ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದಲ್ಲದೆ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

























