ಬಂಟ್ವಾಳ : ಪುರಸಭಾ ಅಧ್ಯಕ್ಷರಾಗಿ ವಾಸು ಪೂಜಾರಿ ಲೊರೆಟ್ಟೋ ಹಾಗೂ ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ ನ ಮುನೀಶ್ ಆಲಿ ಆಯ್ಕೆಯಾಗಿದ್ದಾರೆ.
ಪುರಸಭಾ ಒಟ್ಟು 27 ಸ್ಥಾನಗಳ ಪೈಕಿ 1 ಸ್ಥಾನ ತೆರವಾಗಿದ್ದು, ಬಿಜೆಪಿಯ 11 ಸ್ಥಾನ, ಕಾಂಗ್ರೆಸ್ ನ 11 ಹಾಗೂ ಎಸ್ಡಿಪಿಐ ನ 4 ಸ್ಥಾನ ಹೊಂದಿತ್ತು.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ಸ್ಥಾನ 13ಕ್ಕೆ ಏರಿತ್ತು.
ಕಾಂಗ್ರೆಸ್ ನ ವಾಸು ಪೂಜಾರಿ ಅವರಿಗೆ ಎಸ್.ಡಿ.ಪಿ.ಐ ಬೆಂಬಲಿಸಿದ್ದು, ಉಪಾಧ್ಯಕ್ಷ ಸ್ಥಾನದ ಎಸ್.ಡಿ.ಪಿ.ಐನ ಮುನೀಶ್ ಆಲಿಗೆ ಕಾಂಗ್ರೆಸ್ ಬೆಂಬಲ ನೀಡಿದೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎ.ಗೋವಿಂದ ಪ್ರಭು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಸ್ಪರ್ಧಿಸಿದ್ದರು.



























