ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಾರಂಭಿಸಿದ್ದ ನೇಮಕಾತಿ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಇದೀಗ ಸದ್ರಿ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸದ್ರಿ ಪರೀಕ್ಷೆಯ ತಯಾರಿಯಲ್ಲಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಕಡ್ಡಾಯ ಕನ್ನಡ ಪರೀಕ್ಷೆಯ ತರಬೇತಿಯನ್ನು ಆಯೋಜಿಸಿದ್ದು ಈಗಾಗಲೇ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಆನ್ಲೈನ್ ಮೂಲಕ ತರಗತಿಗಳನ್ನು ಪಡೆದುಕೊಳ್ಳಬಹುದು.
ಗ್ರಾಮ ಆಡಳಿತ ಅಧಿಕಾರಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಲೇಬೇಕು
ಈಗಾಗಲೇ VAO ನೇಮಕಾತಿಯ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ದಿನಾಂಕ 29.09.2024ರಂದು ನಡೆಯಲಿರುವ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಬೇಕು.
ಕಡ್ಡಾಯ ಕನ್ನಡ ಪರೀಕ್ಷೆಯು ಈ ಕೆಳಗಿನ ಮಾನದಂಡದ ಆಧಾರದಲ್ಲಿ ನಡೆಯಲಿದೆ.
- 150 ಅಂಕಗಳಿಗೆ ನಡೆಯಲಿರುವ ಪರೀಕ್ಷೆ.
- ಬಹು ಆಯ್ಕೆಯ ಪ್ರಶೆಗಳ ಪರೀಕ್ಷೆಯಾಗಿರುತ್ತದೆ.
- ಉತ್ತೀರ್ಣರಾಗಲು 50 ಅಂಕವನ್ನು ಪಡೆಯುವುದು ಕಡ್ಡಾಯ
- ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಕೂಡ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಬೇಕು.
- ಈ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕವನ್ನು ಪಡೆದ ಅಭ್ಯರ್ಥಿಗಳಿಗೆ ಮಾತ್ರ VAO ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ.
VAO ನೇಮಕಾತಿ ಪರೀಕ್ಷೆಗೂ ಅಂತಿಮ ಹಂತದ ತರಬೇತಿ ಪ್ರಾರಂಭಿಸಿದ ವಿ. ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಇರಬೇಕಾದ ಅರ್ಹತೆ/ಮಾನದಂಡಗಳು
- ದಿನಾಂಕ 29.09.2024ರಂದು ನಡೆಯಲಿರುವ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
- ಪ್ರಶ್ನೆ ಪತ್ರಿಕೆ 1 ಮತ್ತು ಪ್ರಶ್ನೆ ಪತ್ರಿಕೆ 2 ರ ಮೂಲಕ ನಡೆಯಲಿರುವ ಲಿಖಿತ ಪರೀಕ್ಷೆ
- ಎರಡೂ ಪತ್ರಿಕೆಗಳ ಪರೀಕ್ಷೆ ತಲಾ 100 ಅಂಕಗಳಿಗೆ ನಡೆಯಲಿದೆ
- ದಿನಾಂಕ 27.10.2024 ರಂದು ಪರಿಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದು
PH: 9148935808 / 96204 68869 / 9448527606

























