ಪುತ್ತೂರು : ಜನಸಾಮಾನ್ಯರ ಪಾಲಿನ ಆಶೀರ್ವಾದ ಎಂದೇ ಪ್ರಖ್ಯಾತವಾಗಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ನ 2ನೇ ಸೀಸನ್ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸ್ವಾತಂತ್ರ್ಯೋತ್ಸವ ದಿನದಂದು ಆಶೀರ್ವಾದ್ ಎಂಟರ್ ಪ್ರೈಸಸ್ ನಿಂದ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳಿಗೆ ಸುಮಾರು 4 ಸಾವಿರದಷ್ಟು ಲಾಡು ವಿತರಣೆ ಮಾಡಲಾಯಿತು.
ಮೊದಲ ಸೀಸನ್ ನಲ್ಲಿ ಗ್ರಾಮೀಣ ಭಾಗದ ಮೂಲೆಮೂಲೆಯ ಜನರನ್ನು ತಲುಪಿ, ನಂಬಿಕಾರ್ಹ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿರುವುದು ಆಶೀರ್ವಾದ್ ಎಂಟರ್ ಪ್ರೈಸಸ್ ನ ಹೆಚ್ಚುಗಾರಿಕೆ. ಲಕ್ಕಿ ಸ್ಕೀಂ ಮೂಲಕ ಜನರ ಮನಸೊಳಗಿದ್ದ ಆಕಾಂಕ್ಷೆಯನ್ನು ಪೂರೈಸುತ್ತಿರುವ ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್’ನ ಪ್ರಥಮ ಮಹಡಿಯಿಂದ ಕಾರ್ಯಾಚರಿಸುತ್ತಿರುವ ಆಶೀರ್ವಾದ್ ಲಕ್ಕಿ ಸ್ಕೀಂ ಡ್ರಾ ಹೊಸ ಅಧ್ಯಾಯವನ್ನೇ ಬರೆಯಿತು.
ಇದೀಗ ಆಶೀರ್ವಾದ್ ಲಕ್ಕಿ ಸ್ಕೀಂನ 2ನೇ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
2ನೇ ಸೀಸನ್ ಶುಭಾರಂಭದ ಜೊತೆಗೆ ಲೋಗೋ ಅನಾವರಣ ಹಾಗೂ 160 ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆ. 25ರಂದು ಸಂಜೆ 3 ಗಂಟೆಗೆ ಪುತ್ತೂರು ಬೈಪಾಸ್ ರೋಡ್ ನಲ್ಲಿರುವ ಅಶ್ಮಿ ಕಂಫರ್ಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡುವ ಉದ್ದೇಶದಿಂದ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ತುಳು ಚಿತ್ರರಂಗದ ಹಿರಿಯ ಕಲಾವಿದ ಹಾಗೂ ನಿರ್ಮಾಪಕ ದೇವದಾಸ್ ಕಾಪಿಕಾಡ್, ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ತುಳು ಚಿತ್ರರಂಗದ ಕಲಾವಿದ ರವಿ ರಾಮಕುಂಜ, ಯೂಟ್ಯೂಬರ್ ಆತ್ಮೀಯ ಗಣನಾಯಕ್, ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಮತ್ತು ಸಿಝ್ಲರ್ಸ್ ಅಗ್ರಿಝೋನ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮಣ ಬೈಲಾಡಿ ಸಂಪ್ಯ, ಉದ್ಯಮಿ, ಹುಬ್ಬಳ್ಳಿ ಟ್ರೇಡರ್ಸ್ ನ ಜಯರಾಜ್ ಶೆಟ್ಟರ್, ಝೀ ಕನ್ನಡ ಛೋಟಾ ಚಾಂಪಿಯನ್ 2023ರ ವಿನ್ನರ್ ಬೇಬಿ ಹಾಗೂ ಆತ್ಮಿ ಅತಿಥಿಗಳಾಗಿ ಆಗಮಿಸಲಿದ್ದಾರೆ.


























