ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜಿಗೆ ನಿಯುಕ್ತಿಗೊಳಿಸಿದ ಜಾಗವನ್ನು ಉಳಿಸಿಕೊಂಡು ಅಗತ್ಯ ಸೀ ಫ಼ುಡ್ ಪಾರ್ಕ್ ನ್ನೂ ಪುತ್ತೂರಿನಲ್ಲಿ ಉಳಿಸಿಕೊಳ್ಳುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಕಾರಿಕಾ ಸಂಘದ ವತಿಯಿಂದ ಮನವಿ ಮಾಡಲಾಯಿತು.ಪುತ್ತೂರಿನಲ್ಲಿ ಅಗತ್ಯ ಸರಕಾರಿ ಮೆಡಿಕಲ್ ಕಾಲೇಜಿಗೆ ಬನ್ನೂರು ಪ್ರದೇಶದಲ್ಲಿ 40 ಎಕರೆಯಷ್ಟು ಜಮೀನನ್ನು ನಿಯುಕ್ತಿಗೊಳಿದ್ದು ಎಲ್ಲರಿಗೂ ತಿಳಿದ ವಿಚಾರ, ಈ ನಡುವೆ ಪುತ್ತೂರಿನ ವ್ಯಾವಹಾರಿಕ ಮತ್ತು ಅಭಿವ್ರದ್ಧಿಯ ಪುತ್ತೂರಾಗಿ ನಿಯುಕ್ತಿಗೊಳಿಸಲು ಪುತ್ತೂರಿಗೆ ಸೀ ಫ಼ುಡ್ ಪಾರ್ಕ್ ನ್ನು ತರಿಸಿದ್ದು ಶ್ಲಾಘನೀಯ, ಇದರಿಂದಾಗಿ ಪುತ್ತೂರು ಇನ್ನಷ್ಟು ವ್ಯಾವಹಾರಿಕ ಕ್ಷೇತ್ರದಲ್ಲಿ ಬೆಳೆಯಲು ಅನುಗುಣವಾಗಿದ್ದು ಆದರೆ ಇತ್ತೀಚಿಗಿನ ಬೆಳವಣಿಗೆಗೆ ಸಂಬಂದಿಸಿ ಸರಕಾರಿ ಮೆಡಿಕಲ್ ಕಾಲೇಜಿನ ಜಾಗವನ್ನು ಉಳಿಸಿಕೊಂಡು ಬೇರೆ ಕಡೆ ಸೀ ಫುಡ್ ಪಾರ್ಕ್ ಗೆ ಸ್ಥಳ ನಿಯುಕ್ತಿಗೊಳಿಸಿ ಪುತ್ತೂರಿನಲ್ಲೇ ಸೀ ಫುಡ್ ಪಾರ್ಕ್ ಉಳಿಸುವಂತೆ ಅವರು ಮನವಿಯಲ್ಲಿ ತಿಳಿಸಿದರು. ವರ್ತಕ ಸಂಘದ ಅಧ್ಯಕ್ಷ ಜೇಮ್ಸ್ ಜೆ ಮಾಡ್ತಾ, ಪ್ರಧಾನ ಕಾರ್ಯದರ್ಶಿ ರಪೀಕ್ ದರ್ಬೆ, ಮಾಜಿ ಅಧ್ಯಕ್ಷ ಗೋಪಾಲಕ್ರಷ್ಣ ಭಟ್ ಸಾಮೆತ್ತಡ್ಕ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ನಮ್ಮವರು ಎಲ್ಲಿಯೋ ಹೋಗಿ ಅಡಿಯಾಳುಗುವು ನನಗಿಷ್ಟವಿಲ್ಲ:ಸಂಜೀವ ಮಠಂದೂರು
ಆತ್ಮನಿರ್ಭರ ಭಾರತ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ರೂ.೫೦ಯ ಸೀ ಪುಢ್ ಪಾರ್ಕ್ ಲಭಿಸಿತ್ತು. ನನ್ನ ಉದ್ದೇಶವು ಸುಮಾರು ೫ ಸಾವಿರ ಮಂದಿಗೆ ಉದ್ಯೋಗ ಕೊಡುವ ದ್ರಷ್ಡಿಯಾಗಿತ್ತು. ಯಾಕೆಂದರೆ ನಮ್ಮವರು ದೂರದ ಬೆಂಗಳೂರಿಗೆ ಹೋಗಿ ಬೇರೆಯವರ ಅಡಿಯಾಳಾಗಿ ದುಡಿಯುವುದು ನನಗಿಷ್ಡವಿಲ್ಲ. ಹಾಗಾಗಿ ಪುತ್ತೂರಿಗೆ ಉಪ್ಪಿನಂಗಡಿ ಪುತ್ತೂರು ಮಧ್ಯೆ ಇಂಡಸ್ಟ್ರೀಯಲ್ ಕಾರಿಡಾರ್ ಯೋಜನೆ, ರಸ್ತೆ ಅಭಿವ್ರದ್ದಿ, ೨೪ ಗಂಟೆ ವಿದ್ಯುತ್ ಸೌಲಭ್ಯ ಸೇರಿದಂತೆ ಅನೇಕ ಯೋಜನೆ ರೂಪಿಸಿದ್ದೆ. ಆಹಾರ, ನೀರು ಕೊಡುವುದಕ್ಕಿಂತ ಜನರಿಗೆ ಉದ್ಯೋಗ ಕೊಡುವುದೇ ದೊಡ್ಡ ವಿಚಾರ ಎಂಬುದು ನನ್ನ ಭಾವನೆ. ಇದೀಗ ಯೋಜನೆಗೆ ಬೇರೆ ಜಾಗ ನೋಡುವ ಚಿಂತನೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದೇನೆ. ಆದಷ್ಟು ಬೇಗ ಜಾಗದ ವ್ಯವಸ್ಥೆ ಆಗಬೇಕು. ಇಲ್ಲವಾದಲ್ಲಿ ಯೋಜನೆ ಕೈ ತಪ್ಪುತ್ತದೆ.