ಕಡಬ : ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಪೇರಡ್ಕದಲ್ಲಿ ಮೀನಾಡಿ ಸಮೀಪದ ದೋಳ ನಿವಾಸಿ ಉಮೇಶ (35) ನೀರು ತುಂಬಿದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕೂಲಿಕಾರ್ಮಿಕರಾಗಿದ್ದ ಉಮೇಶ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ನಿನ್ನೆ ಸಂಜೆ ವೇಳೆ ಒಂದು ಕಿ.ಮೀ. ದೂರದ ಪೇರಡ್ಕ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

























