ಮಂಗಳೂರು : ತಿರುಪತಿ ಲಡ್ಡಿಗೆ ದನದ ಕೊಬ್ಬು, ಮೀನಿನೆಣ್ಣೆ
ಉಪಯೋಗಿಸುವ ಬಗ್ಗೆ ವಿಶ್ವ ಹಿಂದೂ ಪರಿಷದ್ ಖಂಡಿಸಿದ್ದು, ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸಿ ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಪ್ರಪಂಚದಾದ್ಯಂತ ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವವಿದ್ದು, ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು, ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ.
ಕಾರಣಕರ್ತರಾಗಿದ್ದ ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿಬಿಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.