ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಧ್ಯ ಪ್ರದೇಶದ ಸತ್ನಾ , ಸರಸ್ವತಿ ವಿದ್ಯಾ ಪೀಠದಲ್ಲಿ ನಡೆಯುವ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಥಮ ಪಿಯುಸಿಯ ಸಮೃದ್ಧಿ ಜೆ. ಶೆಟ್ಟಿ , 100ಮೀ ಹರ್ಡಲ್ಸ್ ಮತ್ತು ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಉದ್ದಜಿಗಿತದಲ್ಲಿ ಬೆಳ್ಳಿಯ ಪದಕ, ಎಮ್., ಪವಿತ್ರ ಜಾ ವಲಿನ್
ಮತ್ತು ಹ್ಯಾ ಮರ್ತ್ರೋ ದಲ್ಲಿ ಚಿನ್ನದ ಪದಕ, ರಿಧಿ ಸಿ. ಶೆಟ್ಟಿ 800ಮೀ ಓಟದಲ್ಲಿ ಚಿನ್ನದ ಪದಕ, 400ಮೀ
ಓಟದಲ್ಲಿ ಬೆಳ್ಳಿಯ ಪದಕ, ಸಚಿತ್ ಪಿ.ಕೆ. 800 ಮೀ ಮತ್ತು 400 ಮೀ ಹರ್ಡ ಲ್ಸ್, 4X400 ಮೀ
ರಿಲೇ ಯಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ ಬೆಳ್ಳಿಯ ಪದಕ, ಸಾ ತ್ವಿಕ್. ಆರ್ 110ಮೀ ಹರ್ಡ ಲ್ಸ್
ನಲ್ಲಿ ಚಿನ್ನದ ಪದಕ, ಚವನ್ಕು ಮಾ ರ್ 4X400ಮೀ ರಿಲೇ ಯಲ್ಲಿ ಚಿನ್ನದ ಪದಕ ಹಾ ಗೂ 4X400 ಮೀ
ರಿಲೇ ಯಲ್ಲಿ ಬೆಳ್ಳಿಯ ಪದಕ, ದ್ವಿತೀಯ ಪಿಯು ಸಿಯ ಆಶ್ವಿಜ ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್ ಕಂಚಿನ ಪದಕ ಪಡೆದಿರುತ್ತಾರೆ.
ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾ ರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು , ಉಪನ್ಯಾಸಕ ಹಾ ಗೂ ಉಪನ್ಯಾ ಸಕೇತರ ವೃಂದದವರು ಅಭಿನಂದಿಸಿದ್ದಾರೆ.

























