ಪುತ್ತೂರು : ಕಾರು ಮತ್ತು ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಂಟ್ವಾಳ ಪಂಜಿಕಲ್ಲು ನಿವಾಸಿ, ಹೋಳಿಗೆ ವ್ಯಾಪಾರಿ ಗಣೇಶ್ (50) ಮೃತ ವ್ಯಕ್ತಿ.
![](https://zoomintv.online/wp-content/uploads/2024/09/IMG-20240921-WA0050-1024x682.jpg)
ಪುರುಷರಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಗಣೇಶ್ ರವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಗಣೇಶ್ ಅವರು ಪ್ರತಿದಿನ ಪುರುಷರಕಟ್ಟೆಯ ಉದಯಭಾಗ್ಯದಿಂದ ಹೋಳಿಗೆ ತೆಗೆದುಕೊಂಡು ಬಳಿಕ ಅಂಗಡಿಗಳಿಗೆ ಹಾಗೂ ಕಚೇರಿಗಳಿಗೆ ಮಾರಾಟ ಮಾಡುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.