ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆಯು ಇಂದು ಚಂದಳಿಕೆ ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ನ ಜಿಲ್ಲಾ ಉಪ ಗವರ್ನರ್ ಜಯರಾಮ ರೈ ವಿಟ್ಲ ಮತ್ತು ದಿಗ್ವಿಜಯ ಗ್ರೂಪ್ ಇದರ ಚಯಾರ್ ಮೆನ್ ಆದ ಶ್ರೀ ದಿನಕರ ಭಟ್ ಮಾವೆ ಭಾಗವಹಿಸಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ವನಿತ್ ಸಾಲಿಯಾನ್ ಅಬೀರಿ , ಗೌರವಾಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ಯೋಗೀಶ ಕೇಪುಳಗುಡ್ಡೆ , ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ಅರುಣ್ ಸಾಲಿಯಾನ್ ಚಂದಳಿಕೆ , ಗಣೇಶ್ ಕಾಂತಮೂಲೆ , ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ , ಸಂಘಟನಾ ಕಾರ್ಯದರ್ಶಿಯಾಗಿ ಅಶ್ವಥ್ ಪೂಜಾರಿ ಪರನೀರು , ಜತೆ ಕಾರ್ಯದರ್ಶಿಯಾಗಿ ನಾರಾಯಣ ಗೌಡ ಓಟೆ ಮತ್ತು ಅನಿಲ್ ಶೆಟ್ಟಿ ಉಜಿರೆಮಾರು , ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜೊತೆ ಕೋಶಾಧಿಕಾರಿಯಾಗಿ ಪ್ರವೀಣ್ ಗೌಡ ಕಟ್ಟತ್ತಿಲ ಮತ್ತು ಸುರೇಶ ಗೌಡ ಓಟೆ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಅಬೀರಿ, ಪ್ರಧಾನ ಸಂಚಾಲಕರಾಗಿ ದಿವಾಕರ ಶೆಟ್ಟಿ ಅಬೀರಿ ಮತ್ತು ಸುಶಾಂತ್ ಸಾಲಿಯಾನ್ ಚಂದಳಿಕೆ , ದತ್ತಿನಿಧಿ ಪ್ರಮುಖರಾಗಿ ಶಶಿಧರ ಕೇಪುಳಗುಡ್ಡೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ತ್ಯಾಗರಾಜ್(ತಿರುಮಲೇಶ) ಕುರುಂಬಳ, ಕ್ರೀಡಾಕಾರ್ಯದರ್ಶಿಯಾಗಿ ಮಹೇಶ್ ಪಡೀಲ್, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಚೇತನ್ ಕೇದಗೆದಡಿ ಮತ್ತು ವೈಭವ್ ಶೆಟ್ಟಿ ಅಬೀರಿ , ಕಾನೂನು ಸಲಹೆಗಾರರಾಗಿ ಗೋವಿಂದ ರಾಜ್ ಪೆರುವಾಜೆ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ವಿಠಲ ಪೂಜಾರಿ ಅತಿಕಾರಬೈಲು, ಗಂಗಾಧರ ಪೂಜಾರಿ ಪರನೀರು, ಗಣೇಶ್ ಪೂಜಾರಿ ಪಟ್ಲ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಚಂದ್ರಹಾಸ ಅಬೀರಿ, ಲೋಕನಾಥ ಕುರುಂಬಳ ಮತ್ತು ಚಿದಾನಂದ ಶೆಟ್ಟಿ ಉಜಿರೆಮಾರು ಇವರುಗಳು ಆಯ್ಕೆಯಾದರು.
ಈ ವರ್ಷದಲ್ಲಿ ಒಟ್ಟು 1,65,000 ರೂಗಳನ್ನು ಮತ್ತು ಕಳೆದ 6ವರ್ಷದಲ್ಲಿ 7,59,530 ರೂಗಳನ್ನು ಮತ್ತು 1706 ಕೆ. ಜಿ ಅಕ್ಕಿಯನ್ನು ದತ್ತಿನಿಧಿ ಯೋಜನೆಯಡಿಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಅಲ್ಲದೆ ತುರ್ತು ಸಂದರ್ಭದಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಲಾಗಿದೆ ಎಂದು ತಿಳಿಸಲಾಯಿತು. 2023-24 ನೇ ವಾರ್ಷಿಕ ಅವಧಿಯಲ್ಲಿ 6,35,244 ರೂಗಳ ವ್ಯವಹಾರವನ್ನು ನಡೆಸಲಾಗಿದೆ ಎಂದು ತಿಳಿಸಲಾಯಿತು.
ಯುವಕೇಸರಿಯ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಸ್ವಾಗತಿಸಿ, ದಿವಾಕರ ಶೆಟ್ಟಿ ಅಬೀರಿ ವಂದಿಸಿದರು,
ವಿಠಲ ಪೂಜಾರಿ ಅತಿಕರಾಬೈಲು ನಿರೂಪಿಸಿ, ಸುಶಾಂತ್ ಸಾಲಿಯಾನ್ ಪ್ರಸ್ತಾವನೆ ಗೈದು ಮತ್ತು ಧನುಷ್ ಅಬೀರಿ ಸಹಕರಿಸಿದರು.