ಬಂಟ್ವಾಳ : ಮನೆಯಲ್ಲಿ ಯಾರು ಇಲ್ಲದ ವೇಳೆಗೆ ನುಗ್ಗಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ದೋಚಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಸಜೀಪಮುನ್ನೂರು ನಿವಾಸಿ ಮಹಿಳೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಸೆ.7 ರಂದು ಮಹಿಳೆ ತಾಯಿಯ ಮನೆಗೆ ತೆರಳಿದ್ದು, ಸೆ.23 ರಂದು ಮನೆಗೆ ಹಿಂತಿರುಗಿ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಜಖಂಗೊಂಡಿದ್ದು, ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಯಾರೋ ಒಳ ಪ್ರವೇಶ ಮಾಡಿರುವುದು ಕಂಡುಬಂದಿರುತ್ತದೆ.
ಮನೆಯ ಹಿಂಬದಿ ಹೋಗಿ ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು, ಮಹಿಳೆ ಒಳಗೆ ಹೋಗಿ ನೋಡಿದಾಗ, ಮನೆಯಲ್ಲಿದ್ದ ಗೋಡ್ರೇಜ್ ಮತ್ತು ಬೆಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2 ½ ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000/- ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಕಳುವಾದ ಸೊತ್ತುಗಳ ಒಟ್ಟು ಮೌಲ್ಯ 1,25,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 159/2024 ಕಲಂ: 331(3),331(4),305 BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ.