ಬಂಟ್ವಾಳ : ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟವು ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದು, ವಿಠಲ ಪದವಿ ಪೂರ್ವಕಾಲೇಜಿನ ಬಾಲಕಿಯರು ದ್ವಿತೀಯ ಸ್ಥಾನ ( ರೇಖಾ, ರೇಷ್ಮಾ, ಸುಶ್ಮಿತಾ, ಸಿಂಚನ. ವಿ, ಅಶ್ವಿತಾ, ಹಿತ, ವಿನ್ಯಾ, ವರ್ಷಿಣಿ, ಸ್ಪೂರ್ತಿ, ಪಲ್ಲವಿ ಜಿ. ಎಸ್ )ಪಡೆದಿದ್ದು, ರೇಖಾ ಬೆಸ್ಟ್ ರೈಡರ್ ಆಗಿದ್ದು ನಾಲ್ಕು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ವಿಠ್ಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ ಗೌಡ ತರಬೇತಿ ನೀಡಿರುತ್ತಾರೆ.
ವಿಶ್ವನಾಥ್ ಅಳಿಕೆ, ರಶೀದ್ ಬನಾರಿ , ವಿಶ್ವರಾಜ್ ವಿಟ್ಲ, ಲೋಕಾನಂದ ವಿಟ್ಲ ಸಹಕರಿಸಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕೃಪಾ ಸಹಕರಿಸಿದ್ದಾರೆ.
ಮಕ್ಕಳ ಈ ಸಾಧನೆಯನ್ನು ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವೃಂದವು ಅಭಿನಂದಿಸಿದೆ.


























