ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾದಡಿಯಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇಬ್ಬರಿಗೂ ಅವಕಾಶ ನೀಡಲಾಗಿದೆ.
ರೈಫಲ್ ವಿಭಾಗದಲ್ಲಿ ಅರ್ಹ ಹಾಗೂ ಇಷ್ಟ ಇದ್ದ ಮಹಿಳಾ ಹಾಗೂ ಪುರುಷರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ಸಂಬಂಧಪಟ್ಟಂತೆ ಅರ್ಜಿಗಳು ಆರಂಭ ಯಾವಾಗ, ಕೊನೆ ಯಾವಾಗ, ವಿದ್ಯಾರ್ಹತೆ, ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನು ಹಲವು ಮಾಹಿತಿ ಇಲ್ಲಿ ಇದೆ. ಈ ಸುವರ್ಣಾವಕಾಶವನ್ನು ಅಭ್ಯರ್ಥಿಗಳು ಮಿಸ್ ಮಾಡೊಕೊಳ್ಳಬಾರದು. ಆಸಕ್ತರು ಇದನ್ನು ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಕೆಗೆ ಮುಂದಾಗಬೇಕು.
ಹುದ್ದೆಗಳ ಹೆಸರುಗಳೇನು..?
ರೈಫಲ್ ಫುರುಷ, ರೈಫಲ್ ಮಹಿಳಾ (ಜನರಲ್ ಡ್ಯುಟಿ)
ಯಾವ್ಯಾವ ಕ್ರೀಡೆಯ ಸ್ಪರ್ಧಿಗಳಿಗೆ ಅವಕಾಶವಿದೆ?
- ಅಥ್ಲೆಟಿಕ್- 6 ಹುದ್ದೆಗಳು (3 ಪುರುಷ, 3 ಮಹಿಳಾ)
- ಫೆನ್ಸಿಂಗ್- 4 ಹುದ್ದೆಗಳು (2 ಪುರುಷ, 2 ಮಹಿಳಾ)
- ಫುಟ್ಬಾಲ್- 6 ಹುದ್ದೆಗಳು (3 ಪುರುಷ, 3 ಮಹಿಳಾ)
- ಅರ್ಚರಿ: 6 ಹುದ್ದೆಗಳು (3 ಪುರುಷ, 3 ಮಹಿಳಾ)
- ಬ್ಯಾಡ್ಮಿಂಟನ್: 4 ಹುದ್ದೆಗಳು (2 ಪುರುಷ, 2 ಮಹಿಳಾ)
- ಶೂಟಿಂಗ್: 4 ಹುದ್ದೆಗಳು (2 ಪುರುಷ, 2 ಮಹಿಳಾ)
- ಜುಡೋ: 4 ಹುದ್ದೆಗಳು (2 ಪುರುಷ, 2 ಮಹಿಳಾ)
- ಕರಾಟೆ: 4 ಹುದ್ದೆಗಳು (2 ಪುರುಷ, 2 ಮಹಿಳಾ)
ಒಟ್ಟು ಹುದ್ದೆಗಳು– 38
ಶೈಕ್ಷಣಿಕ ಅರ್ಹತೆ-
10ನೇ ತರಗತಿ ಪೂರ್ಣಗೊಳಿಸಿರಬೇಕು
ವಯೋಮಿತಿ
- ಜನರಲ್/ ಒಬಿಸಿ ಅಭ್ಯರ್ಥಿಗಳು- 18 ರಿಂದ 28 ವರ್ಷಗಳು
- ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 18 ರಿಂದ 33 ವರ್ಷಗಳು
ಅರ್ಜಿ ಶುಲ್ಕ..?
- ಜನರಲ್/ ಒಬಿಸಿ ಅಭ್ಯರ್ಥಿಗಳು- 100 ರೂಪಾಯಿ
- ಎಸ್ಸಿ/ಎಸ್ಟಿ ಅಭ್ಯರ್ಥಿಗಳು- ಶುಲ್ಕವಿಲ್ಲ
- ಆನ್ಲೈನ್ ಮೂಲಕ ಪಾವತಿ ಮಾಡಬೇಕು
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
- ದೈಹಿಕ ಪ್ರಮಾಣಿತ ಪರೀಕ್ಷೆ (ಪಿಎಸ್ಟಿ)
- ಫೀಲ್ಡ್ ಟ್ರೈಯಲ್
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
ಈ ಹುದ್ದೆಯ ಮುಖ್ಯ ದಿನಾಂಕ–
ಅಕ್ಟೋಬರ್ 27, 2024