ಉತ್ತರ ಪ್ರದೇಶ : ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆಳಕು ತೋರುವ ದೀವಿಗೆ ಇದ್ದಂತೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಬೇಕಿದ್ದ ಶಿಕ್ಷಕನೇ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ನೀಟ್ ಕೋಚಿಂಗ್ ಸೆಂಟರ್ನ ಬಯಾಲಜಿ ಟೀಚರ್ ತಾನೊಬ್ಬ ಶಿಕ್ಷಕನೆಂಬುದನ್ನೂ ಮರೆತು ವಿದ್ಯಾರ್ಥಿನಿಯೊಬ್ಬಳನ್ನು ತಬ್ಬಿ ಮುತ್ತಿಟ್ಟಿದ್ದಾನೆ. ಮಾತ್ರವಲ್ಲದೆ ಆಕೆಯನ್ನು ಶೌಚಗೃಹಕ್ಕೆ ಕರೆದುಕೊಂಡು ಹೋಗಿ ಅನುಚಿತ ವರ್ತನೆಯನ್ನು ತೋರಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಕಾನ್ಪುರದ ಪ್ರತಿಷ್ಠಿತ ಕಾಕದೇವ್ ನೀಟ್ ಕೋಚಿಂಗ್ ಸೆಂಟರ್ನಲ್ಲಿ ನಡೆದಿದ್ದು, ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ತಬ್ಬಿ ಮುತ್ತಿಟ್ಟು ಅನುಚಿತವಾಗಿ ವರ್ತಿಸಿದ್ದಾನೆ. ಬಯಾಲಜಿ ಶಿಕ್ಷಕನಾಗಿರು ಸಾಹಿಲ್ ಸಿದ್ದಿಕಿ ಈ ಅಸಹ್ಯ ಕೃತ್ಯವನ್ನು ಎಸಗಿದ್ದು, ಈ ದೃಶ್ಯಗಳು ಕೋಚಿಂಗ್ ಸೆಂಟರ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ಅಶ್ಲೀಲ ಕೃತ್ಯಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಕೋಚಿಂಗ್ ಸೆಂಟರ್ನ ಡೈರೆಕ್ಟರ್ ಆಶಿಶ್ ಶ್ರೀವಾಸ್ತವ ಮಾತನಾಡಿದ್ದು, ʼಈ ಹಿಂದೆಯೂ ಸಹ ಕೋಚಿಂಗ್ ಸೆಂಟರ್ನ ಅನೇಕ ವಿದ್ಯಾರ್ಥಿನಿಯರು ಸಾಹಿಲ್ ನಡವಳಿಕೆ ಸರಿಯಿಲ್ಲ ಎಂಬ ಬಗ್ಗೆ ದೂರನ್ನು ನೀಡಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರೀ ಸರಿಯಾದ ಸಾಕ್ಷಿ ಸಿಕ್ಕಿದ್ದು, ಈ ಬಗ್ಗೆ ದೂರು ನೀಡಿದ ಬಳಿಕ ಅತನನ್ನು ಪೊಲೀಸರು ಬಂಧಿಸಿದ್ದಾರೆʼ ಎಂದು ಹೇಳಿದ್ದಾರೆ.
#कानपुर में नीट की कोचिंग में बायोलॉजी पढ़ने वाला यह शिक्षक अपनी ही स्टूडेंट के साथ अश्लील हरकत करता हुआ cctv में हुआ क़ैद।
— Gaurav Trivedi (@gaurav3vedi) September 29, 2024
Cctv में साफ़ दिख रहा है कि शिक्षक क्लास में पढ़ने वाली छात्रा को बाथरूम में ले जाता है।
आरोपी शिक्षक के खिलाफ इसके पहले भी कई छात्राओं ने प्रबंधन से… pic.twitter.com/u6ThEOeCB8