ಬೆಂಗಳೂರು : ಸೀರಿಯಲ್ ನಟಿ ಮದುವೆ ನಿರಾಕರಿಸಿದಳೆಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ನಟಿ ವೀಣಾ ಮದುವೆ ನಿರಾಕರಿಸಿದ್ದಾಳೆಂದು ಯುವಕ ಮನನೊಂದಿದ್ದಾನೆ. ಕೊನೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ.
ಮದನ್ (25) ಮೃತಪಟ್ಟ ಯುವಕ. ನೇಣು ಬಿಗಿದುಕೊಂಡು ಮದನ್ ಸೂಸೈಡ್ ಮಾಡಿಕೊಂಡಿದ್ದಾನೆ. ಇಬ್ಬರು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿಯಲ್ಲಿ ಮದುವೆ ಬಗ್ಗೆ ಮದನ್ ಪ್ರಸ್ತಾಪ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ನಟಿ ವೀಣಾ ಮದುವೆಗೆ ಒಪ್ಪದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದನ್ ನಟಿಯ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದನ್ ಮತ್ತು ವೀಣಾ ಲಿವ್ ಇನ್ ಸಂಬಂಧದಲ್ಲಿದ್ದರು.
ಮೃತನ ಪೋಷಕರು ಯುವತಿ ಮೇಲೆ ಆರೋಪ ಮಾಡಿದ್ದಲ್ಲದೆ, ಮದುವೆಯಾಗುವುದಾಗಿ ಹಲವರಿಗೆ ವಂಚನೆ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಪೋಷಕರ ಆರೋಪ ಅಧರಿಸಿ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.