ಪುತ್ತೂರು : ಹಿರಿಯ ನಾಟಕ ಕಲಾವಿದ ನರಿಮೊಗರು ನಿವಾಸಿ ಸೇಸಪ್ಪ ಪೂಜಾರಿ (55) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೂಲತಃ ಬಂಟ್ವಾಳ ತಾಲೂಕಿನ ಅನಂತಾಡಿ ನಿವಾಸಿಯಾಗಿದ್ದ ಸೇಸಪ್ಪ ಪೂಜಾರಿ ಅವರು ಅನೇಕ ವರ್ಷಗಳಿಂದ ನರಿಮೊಗರಿನಲ್ಲಿ ವಾಸವಾಗಿದ್ದರು.
ಪುರುಷರಕಟ್ಟೆಯಲ್ಲಿ ‘ಅನ್ನಪೂರ್ಣ’ ಹೆಸರಿನ ಹೋಟೆಲ್ ನಡೆಸುತ್ತಿದ್ದರು.
ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸೇಸಪ್ಪ ಪೂಜಾರಿಯವರು ಕಿರು ಚಿತ್ರಗಳಲ್ಲೂ ನಟಿಸಿದ್ದರು.
‘ಬಂಗಾರ್ ಕಲಾವಿದೆರ್ ಪುರುಷರಕಟ್ಟೆ’ ನಾಟಕ ತಂಡದ ಸದಸ್ಯರಾಗಿದ್ದ ಸೇಸಪ್ಪ ಪೂಜಾರಿ ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


























