ಪುತ್ತೂರು : ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಶ್ರಯದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.

ಎಸ್.ಎಫ್.ಎಲ್. ಝೋನಲ್ ಬಿಸಿನೆಸ್ ಹೆಡ್ ಶರತ್ಚಂದ್ರ ಭಟ್ ಕಾಕುಂಜೆ ಸಹಿತ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅತಿಥಿಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಿಸಿದರು.
ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮಾನಾಥ್ ಶೆಟ್ಟಿ, ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಶ ಕುಮಾರ್, ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀವತ್ಸರಾಜ್ ಎಂ.ಜಿ., ಕೆಂಪುಕಲ್ಲು ಉತ್ಪಾದಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷರಾದ ಹೇಮಚಂದ್ರ ಎ.ಪಿ., ಎಸ್. ಎಫ್.ಎಲ್. ನ ಝೋನಲ್ ಕಲೆಕ್ಷನ್ ಹೆಡ್ ನಾಗರಾಜ್ ಬಿ., ಎಸ್. ಎಫ್.ಎಲ್. ನ ಸ್ಟೇಟ್ ಹೆಡ್ ಸದಾಶಿವ, ರೀಜನಲ್ ಬಿಸಿನೆಸ್ ಹೆಡ್ ಮಹೇಶ್ ಕುಮಾರ್ ಸಿ. ಯಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಲವು ಗಣ್ಯರು, ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರು, ಮಾಲಕರು ಹಾಗೂ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಪುತ್ತೂರು, ಸುಳ್ಯ, ಬಂಟ್ವಾಳ, ನೆಲ್ಯಾಡಿ ಶಾಖೆಯ ಶಾಖಾ ಪ್ರಬಂಧಕರು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುತ್ತೂರು ವ್ಯಾಪ್ತಿಯ ಸುಮಾರು 1008 ವಿದ್ಯಾರ್ಥಿಗಳಿಗೆ 42,19,500 ರೂ. ವಿದ್ಯಾರ್ಥಿ ನಿಧಿಯನ್ನು ವಿತರಿಸಲಾಯಿತು.
ಸುಮಾರು 51 ವರುಷಗಳಿಂದ ವಾಹನಕ್ಕೆ ಸಾಲವನ್ನು ನೀಡುತ್ತಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್, ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ ಮಕ್ಕಳ ಕಲಿಕೆಗಾಗಿ 11 ವರುಷಗಳಿಂದ ವಿದ್ಯಾರ್ಥಿ ನಿಧಿ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

























