ಉಡುಪಿ : ಹೆಬ್ರಿಯಲ್ಲಿ ರವಿವಾರ(ಅ.6) ಮೇಘಸ್ಫೋಟ ಸಂಭವಿಸಿದ್ದು, ಧಾರಾಕಾರ ಮಳೆ, ಪ್ರವಾಹದಿಂದ ಜನರು ತತ್ತರಿಸಿ ಹೋದ ಘಟನೆ ವರದಿಯಾಗಿದೆ.
ಮಧ್ಯಾಹ್ನ 3.30ರಿಂದ ಸಂಜೆ 4 ಗಂಟೆವರೆಗೆ ಒಂದು ಗಂಟೆ ಕಾಲ ದಿಢೀರ್ ಮಳೆ ಸುರಿದಿದ್ದು, ಬಲ್ಲಾಡಿ, ಕಂತಾರ್‌ಬೈಲು ಗ್ರಾಮದ ಜನರು ನಲುಗಿ ಹೋಗಿದ್ದಾಾರೆ. ಒಂದು ಗಂಟೆಕಾಲ ಸುರಿದ ಧಾರಾಕಾರ ಮಳೆಗೆ ಗ್ರಾಮದ ಕೆಲವು ಮನೆಗಳು ಜಲಾವೃತಗೊಂಡಿದ್ದು, ಒಂದು ಕಾರು, 15ಕ್ಕೂ ಹೆಚ್ಚು ದನಕರುಗಳು, ಅಡಿಕೆ ಮರಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ.
ಮಳೆಯಿಂದ ನಲುಗಿದ ಗ್ರಾಮದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಸ್ಥಳೀಯರು, ಅಧಿಕಾರಿಗಳು ದೌಡಾಯಿಸಿದ್ದಾರೆ. ದಿಢೀರ್ ಮೇಘಸ್ಫೋಟದಿಂದ ಪ್ರವಾಹ ಸಂಭವಿಸಿದ್ದು, ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ.


























