ಪುತ್ತೂರು : ಚಲಿಸುತ್ತಿದ್ದ ಬಸ್ ಮೇಲೆ ಕಲ್ಲೆಸೆತದಿಂದ ಪ್ರಯಾಣಿಕ ಬಾಲಕ ಗಾಯಗೊಂಡಿರುವ ಘಟನೆ ಪೆರಿಗೇರಿಯಲ್ಲಿ ನಡೆದಿದೆ.
ಸುಳ್ಯಪದವಿನಿಂದ ಪುತ್ತೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಪೆರಿಗೇರಿ ಜಂಕ್ಷನ್ ಬಳಿ ಕಲ್ಲೊಂದು ಎಸೆಯಲ್ಪಟ್ಟು ಬಸ್‌ನ ಕಿಟಕಿ ಗಾಜನ್ನು ಸೀಳಿ ಒಳ ಬಂದು ಬಸ್‌ನಲ್ಲಿದ್ದ ತಾ.ಪಂ ಮಾಜಿ ಸದಸ್ಯೆ ರೇಖಾನಾಗರಾಜ್ ಅವರ ಪುತ್ರ ಶ್ರೀಶ ಎಂಬವರ ಹಣೆಗೆ ತಾಗಿದೆ.
ತಕ್ಷಣ ಬಸ್ ಚಾಲಕ ಬಸ್ ಅನ್ನು ನಿಲ್ಲಿಸಿ ಹೊರಗೆ ಬಂದು ಪರಿಶೀಲನೆ ನಡೆಸಿದ್ದು, ಕಲ್ಲು ಬಸ್‌ನ ಒಳಗೆ ಹೇಗೆ ಬಂತೆಂಬುದೇ ತಿಳಿದು ಬಂದಿಲ್ಲ. ಘಟನೆಯಿಂದ ಶ್ರೀಶ ಅವರ ತಲೆಗೆ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬಸ್‌ಗೆ ಕಿಡಿಗೇಡಿಗಳು ಕಲ್ಲು ಬಿಸಾಡಿರಬಹುದೆಂಬ ಆರೋಪ ಕೇಳಿ ಬರುತ್ತಿದೆ.
ಈ ಬಗ್ಗೆ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಗೊಂಡಿದ್ದಾರೆ.



























