ಪುತ್ತೂರು : ಜೂನ್ ಮೊದಲವಾರದಿಂದಲೇ ಪ್ರಾರಂಭವಾದ ಮಳೆಯಿಂದ, ಕೃಷಿಕರು ಉಳುಮೆಯಲ್ಲಿ ತೊಡಗಿಕೊಂಡು, ಸಸಿಮಡಿ ಮಾಡಿದ್ದರು. ಸಸಿಮಡಿ ಹಸನಾಗಿ ಬೆಳೆದಿದ್ದು, ನೀರಾವರಿ ಭೂಮಿಯಲ್ಲಿ ಅನೇಕರು ಭತ್ತದ ನಾಟಿ ಕೆಲಸ ಪ್ರಾರಂಭ ಮಾಡಿದ್ದಾರೆ. ಉಳುಮೆ ಮಾಡುವ ರೈತರು ಇನ್ನೊಂದು ವಾರದಲ್ಲಿ ನಾಟಿ ಕೆಲಸಕ್ಕೆ ಮತ್ತೊಮ್ಮೆ ಗದ್ದೆಗಳನ್ನು ಉತ್ತು ಹದಗೊಳಿಸಲಿದ್ದಾರೆ. ಭತ್ತದ ಗದ್ದೆಗಳಿಗೆ ತೆರಳುವ ರಸ್ತೆ ಮಾರ್ಗ ಸುಸ್ಥಿತಿಯಲ್ಲಿರುವ ಕಡೆ ರೈತರು ಟಿಲ್ಲರ್ಗಳು, ಟ್ರ್ಯಾಕ್ಟರ್ಗಳಿಂದ ಉಳುಮೆ ಮಾಡುತ್ತಿದ್ದಾರೆ.
ಅದಲ್ಲದೆ ಈ ಬಾರಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯನ್ನು ಶಾಸಕ ಮಠಂದೂರು ರವರು ಪುತ್ತೂರಿನಲ್ಲಿ ಆರಂಭಿಸಿದ್ದು ಈ ಯೋಜನೆಗೆ ಪೂರಕ ವೆಂಬಂತೆ ಪ್ರಗತಿ ಪರ ಕೃಷಿಕ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬುಡಿಯಾರ್ ರಾಧಾಕೃಷ್ಣ ರೈ ಯವರು ತಮ್ಮ ಮನೆ ಅಂಗಳದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಭತ್ತದ ಬೇಸಾಯಕ್ಕೆ ಚಾಲನೆ ನೀಡಿದರು.
ರಾಧಾಕೃಷ್ಣ ರೈ ಯವರು ಪ್ರಗತಿ ಪರ ಕೃಷಿಕರಾಗಿದ್ದು ಹಲವು ರೀತಿಯ ಕೃಷಿ ಚಟುವಟಿಕೆ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕುರಿಯ ದಲ್ಲಿರುವ ಇವರ ಬುಡಿಯಾರ್ ಫಾರ್ಮ್ಸ್ ನ ಕೃಷಿ ಚಟುವಟಿಕೆ ಗಳನ್ನು ನೋಡಲು ವರ್ಷ ವು ಹಲವು ಸಂಘ ಸಂಸ್ಥೆಗಳು ಇವರ ಮನೆಗೆ ಬೇಟಿ ನೀಡಿ ಕೃಷಿ ಮಾಹಿತಿಗಳನ್ನು ಪಡೆಯುತ್ತಾರೆ.