ಉತ್ತರ ಕನ್ನಡ : ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಮೈಸೂರು ಮೂಲದ ಅಭಿ ಹಾಗೂ ಇನ್ನೋರ್ವ ಪ್ರವಾಸಿಗನನ್ನು ಲೈಫ್ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ರಜೆ ಹಿನ್ನಲೆ ಗೋಕರ್ಣ ಪ್ರವಾಸಕ್ಕೆಂದು ಯುವಕರು ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ್ , ಮೋಹನ್ , ಶಿವಪ್ರಸಾದ್ ಎನ್ನುವವರು ರಕ್ಷಣೆಗೆ ಮಾಡಿದ್ದಾರೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.