ಜಾರ್ಖಂಡ್ : ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ದುಮ್ಕಾ ಜಿಲ್ಲೆಯ ಬಾಗ್‌ಜೋಪಾ ಗ್ರಾಮದಲ್ಲಿ 26 ವರ್ಷದ ಮಹಿಳೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಸೆಂಡೋ ದೇವಿ ಎಂದು ಗುರುತಿಸಲಾಗಿದ್ದು, ಪತಿ ತನಗೆ ದಸರಾ ಸಂದರ್ಭದಲ್ಲಿ ಸೀರೆ ತಂದುಕೊಟ್ಟಿಲ್ಲ ಎಂದು ಅಸಮಾಧಾನ ಹೊಂದಿದ್ದಳು.
ಮಹಿಳೆ ದಸರಾಕ್ಕೆ ಹೊಸ ಸೀರೆಯನ್ನು ಕೇಳಿದ್ದಳು ಆದರೆ ಟ್ರಾಕ್ಟರ್ ಡ್ರೈವರ್ ಆಗಿರುವ ಅವರ ಪತಿಗೆ ತಂದುಕೊಡಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಆಕೆ ತಪ್ಪು ಹೆಜ್ಜೆಯಿಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


























