ದೇವಾಲಯಗಳಿಗೆ ಹೋಗುವ ಸಂದರ್ಭದಲ್ಲಾಗಿರಲಿ ಅಥವಾ ಯಾವುದೇ ಪೂಜಾ ಕಾರ್ಯಕ್ರಮಗಳಿಗೆ ಹೋಗುವ ಸಮಯದಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆಗಳನ್ನು ತೊಟ್ಟರೆಯೇ ಚಂದ. ಆದ್ರೆ ನವರಾತ್ರಿ ಹಬ್ಬದಲ್ಲಿ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮೂವರು ಮಾಡೆಲ್ ಗಳು ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಇವರುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೆಂಥಾ ಸಂಸ್ಕೃತಿ ಎಂದು ಇವರ ಅವತಾರಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಲ್ಕತ್ತಾದ ಮೂವರು ಮಾಡೆಲ್‌ಗಳು ದುರ್ಗಾ ಪೂಜೆಯಲ್ಲಿ ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ.
ಸ್ವತಃ ಈ ಫೋಟೋವನ್ನು ಮಾಡೆಲ್ ಸನ್ನತಿ (sannati__ ) ಮತ್ತು (selena.bb22) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೂವರು ಯುವತಿಯರು ಅರೆಬರೆ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿ ದೇವಿಯ ವಿಗ್ರಹದ ಮುಂದೆ ನಿಂತಿರುವ ದೃಶ್ಯವನ್ನು ಕಾಣಬಹುದು.
ಇದೆಂಥಾ ಸಂಸ್ಕೃತಿ ಎಂದು ಇವರ ಅವತಾರಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.



























