ಬೆಳ್ತಂಗಡಿ : ಆರಂಬೊಡಿ ಗ್ರಾಮದ ಪಿಲಿಕಜೆ ಎನ್ನುವಲ್ಲಿ ಮಹಿಳೆಯೋರ್ವರು ಮನೆಯ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಆರಂಬೊಡಿ ಗ್ರಾಮದ ಪಿಲಿಕಜೆ ಮನೆ ನಿವಾಸಿ ಮಮತಾ (45) ಮೃತ ಮಹಿಳೆ.
ಮಮತಾ ಪತಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧೀನತೆ ಕಳೆದುಕೊಂಡು ಮನೆಯಲ್ಲೇ ಇದ್ದರು. ಆ ಬಳಿಕ ಮಮತಾ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಇದ್ದರು ಎನ್ನಲಾಗಿದೆ.
ಅ.13ರಂದು ಬೆಳಗಿನ ಉಪಹಾರದ ಬಳಿಕ ಮಮತಾ ಅವರು ಮನೆಯಿಂದ ಕಾಣೆಯಾಗಿದ್ದು, ಅವರ ಮಕ್ಕಳು ಹಾಗೂ ನೆರೆ-ಹೊರೆಯವರು ಹುಡುಕಾಡಿದಾಗ ಆದಿನ ರಾತ್ರಿಯಾದರೂ ಪತ್ತೆಯಾಗದೆ ಇದ್ದು ಅ. 14 ರಂದು ಬೆಳಗ್ಗೆ ಹುಡುಕಾಡಿದಾಗ ಮಮತಾ ಅವರ ಮೃತದೇಹವು ಮನೆಯ ಅಂಗಳದಲ್ಲಿ ಇರುವ ಬಾವಿಯಲ್ಲಿ ಪತ್ತೆಯಾಗಿದೆ.
ಪುತ್ರ ಶ್ರೀಕಾಂತ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.