ಪುತ್ತೂರು : ವಾರಣಾಶಿ ಸ್ವಿಮ್ ಅಕಾಡೆಮಿ ಅಡ್ಯನಡ್ಕದ ನಂದನ್ ನಾಯ್ಕ್ ಇವರು Kensington swimming pool ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) (SGFI) ಡೈವಿoಗ್ (ಈಜು) ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ ಹಾಗೂ ಎರಡು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಫಿಲೋಮಿನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
ಇವರು ಮುಕ್ವೆ ಮಜಲುಮಾರು ನಿವಾಸಿ ರವಿ ಸಂಪತ್ ಹಾಗೂ ಕ್ಷಮಿತ ದಂಪತಿಯ ಪುತ್ರ. ಇವರಿಗೆ ಕೋಚ್ ಪಾರ್ಥ ವಾರಣಾಶಿ , ನಿರೂಪ್ ಜಿರ್, ವಿಕಾಸ್, ದೀಕ್ಷಿತ್, ವೆಂಕಟೇಶ್, ರಾಜೇಶ್ ತರಬೇತಿ ನೀಡುತ್ತಿದ್ದಾರೆ.




























