ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಜೆಸಿಐ ವಿಟ್ಲ, ರೋಟರಿ ಕ್ಲಬ್ ವಿಟ್ಲ, ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ಸಹಯೋಗದಲ್ಲಿ ಮೂರು ದಿನಗಳ ಶಿಕ್ಷಕ ತರಬೇತಿ ಕಾರ್ಯಗಾರವು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಡಿ.ಶ್ರೀಧರ ಶೆಟ್ಟಿಯವರು “ಶಿಕ್ಷಣ ಪಕ್ವವಾಗುವುದಕ್ಕೆ, ಶಿಕ್ಷಕನಲ್ಲಿಯ ಮಾಹಿತಿಯನ್ನು ಪ್ರಸ್ತುತ ಪರಿಸ್ಥಿತಿಗೆ ನವೀಕರಿಸುವ ದೆಸೆಯಲ್ಲಿ “ರಿಬೂಟ್ ” ಕಾರ್ಯಾಗಾರದ ಆಯೋಜನೆಯಾಗಿದ್ದು, ಇದಕ್ಕೆ ವಿಟ್ಲ ಪರಿಸರದಲ್ಲಿಯ ಅಂತರಾಷ್ಟ್ರೀಯ ಸಂಸ್ಥೆಗಳ ಹಾಗೂ ವ್ಯಕ್ತಿತ್ವ ವಿಕಸನ ಸಂಸ್ಥೆಗಳಾದ ರೋಟರಿ ಕ್ಲಬ್ ವಿಟ್ಲ, ಹಾಗೂ ಲಯನ್ಸ್ ಕ್ಲಬ್ ವಿಟ್ಲ ಮತ್ತು ಜೆಸಿಐ ವಿಟ್ಲ,ಇವರ ಪ್ರೋತ್ಸಾಹ ಮತ್ತು ಆರ್ಥಿಕ ಸಂಪನ್ಮೂಲ ಒದಗಿಸಿ ಸಹಕರಿಸಿದ ಕಾರ್ಯ ಶ್ಲಾಘನೀಯ” ಎಂದು ಅಭಿನಂದಿಸಿದರು.
14.10.2024 ರಿಂದ 16.10.2024ರವರೆಗಿನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೌಜನ್ಯ ಹೆಗ್ಡೆ, ರಾಜೇಶ್ವರಿ. ಡಿ ಶೆಟ್ಟಿ,ಅನಂತ ಸುಬ್ರಹ್ಮಣ್ಯ ಶರ್ಮ, ಜ್ಯೋತಿ ಪ್ರಶಾಂತ್ ಹಾಗೂ ಡಾ.ಜ್ಯೋತಿ ಪಿಎಸ್ ರವರು ವಿದ್ಯಾರ್ಥಿಗಳ ಸಮಾಜದಲ್ಲಿನ ತರಗತಿಯ ಮತ್ತು ವೈಯಕ್ತಿಕ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಶಿಕ್ಷಕರು ಯಾವ ರೀತಿ ತಿಳಿ ಹೇಳಬಹುದು, ಆಧುನಿಕ ಶೈಕ್ಷಣಿಕ ಪದ್ಧತಿಯಲ್ಲಿ ಶಿಕ್ಷಕರು ಬಳಸಿಕೊಳ್ಳಬೇಕಾದ ವಿವಿಧ ತಾಂತ್ರಿಕ ಅಂಶಗಳನ್ನು ವಿವರಿಸಿದರು.
ಸುಮಾರು 43 ಶಿಕ್ಷಕರು ಭಾಗವಹಿಸಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಪೂರ್ವ ರಾಜ್ಯಪಾಲ ಡಾ. ಗೀತ ಪ್ರಕಾಶ್ “ಶಿಕ್ಷಕನ ತಿಳಿವು ಸಮಾಜದ ನಿರ್ಮಾಣದ ಬುನಾದಿ” ಎಂದರು. ಜೆಸಿಐ ವಿಟ್ಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತಡ್ಕ,ಕಾರ್ಯದರ್ಶಿ ಮುರಳಿಪ್ರಸಾದ್, ರೋಟರಿ ಅಧ್ಯಕ್ಷ ಹರೀಶ್ ಸಿ. ಹೆಚ್, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷ ರಜಿತ್ ಆಳ್ವ, ಕಾರ್ಯದರ್ಶಿ ಅರವಿಂದ ರೈ, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷರಾದ ಡಿ. ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮೋಹನ ಎ, ಜತೆ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀಪ್ರಕಾಶ್ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಕರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಿ. ಜಯರಾಮ ರೈ ಸ್ವಾಗತಿಸಿ, ಸಹಶಿಕ್ಷಕಿ ಗೀತಾ ದಿವಾಕರ್ ನಿರೂಪಿಸಿ,ಆಡಳಿತಾಧಿಕಾರಿ ರಾಧಾಕೃಷ್ಣ ಎ ವಂದಿಸಿದರು.