ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಆಕೆಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರೇಯಸಿಯನ್ನು ಮುದ್ದಾಡುತ್ತಿರುವಾಗಲೇ ಆಕೆಯ ಫೋಷಕರು ಮನೆಗೆ ಬಂದಿದ್ದು, ಈ ಸಮಯದಲ್ಲಿ ದಿಕ್ಕು ತೋಚದೇ ಯುವತಿ ಆತನನ್ನು ಕಬ್ಬಿಣದ ಸೂಟ್ಕೇಸ್ ಒಳಗೆ ಬಚ್ಚಿಟ್ಟಿದ್ದಾಳೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಒಡಿಶಾದಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಮನೆಗೆ ಬಂದ ಪೋಷಕರಿಗೆ ಮಗಳ ಕೋಣೆಯೊಳಗೆ ಯಾರೋ ಇರುವುದು ಅನುಮಾನ ಬಂದಿದೆ. ಕೊನೆಗೆ ಯುವತಿಯಿಂದಲೇ ಸೂಟ್ ಕೇಸ್ ತೆರೆಸಿದಾಗ ಯುವಕನೊಬ್ಬ ಇರುವುದು ಪತ್ತೆಯಾಗಿದೆ.