ಬೆಂಗಳೂರು : ಬಾಬುಸಾಬ್‌ಪಾಳ್ಯದಲ್ಲಿ ಭಾರೀ ಮಳೆಗೆ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಬುಡಮೇಲಾಗಿ ಬಿದ್ದಿತು. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಹಲವಾರು ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಅವರ ಪೈಕಿ 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಉಳಿದವರ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಕಟ್ಟಡ ಮಾಲಕ ಮುನಿರೆಡ್ಡಿ, ಪುತ್ರ ಭುವನ್ ಹಾಗೂ ಗುತ್ತಿಗೆದಾರ ಮುನಿಯಪ್ಪ ಎನ್ನುವವರನ್ನ ಪೊಲೀಸರು ಬಂಧಿಸಿದ್ದಾರೆ.


























