ಪುತ್ತೂರು: ಹೊರ ಜಿಲ್ಲೆಯ ಜೆಸಿಬಿಯಿಂದ ಕೆಲಸ ಮಾಡಿಸುತ್ತಿರುವುದಕ್ಕೆ ಪುತ್ತೂರು ಜೆಸಿಬಿ ಯೂನಿಯನ್‌ನವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಪುರುಷರಕಟ್ಟೆಯಲ್ಲಿ ಅ.25ರಂದು
ನಡೆದ ಬಗ್ಗೆ ವರದಿಯಾಗಿದೆ. ಹೊರ ಜಿಲ್ಲೆಯಿಂದ ಬರುವ ಜೆಸಿಬಿ ಕೆಲಸ ಮಾಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಪುತ್ತೂರು ಯೂನಿಯನ್ ಅಡಿಯಲ್ಲಿ ಮತ್ತು ಇಲ್ಲಿನ ಮಾರುಕಟ್ಟೆ ದರದಲ್ಲಿ ಕೆಲಸ ನಿರ್ವಹಿಸಬೇಕೆಂಬ ಕುರಿತು ಇತ್ತೀಚೆಗೆ ಪುತ್ತೂರು ಜೆಸಿಬಿ ಮಾಲಕರ ಯೂನಿಯನ್‌ನಲ್ಲಿ ನಿರ್ಣಯಿಸಲಾಗಿತ್ತು.
ಪುರುಷರಕಟ್ಟೆಯಲ್ಲಿ ಹಾಸನದಿಂದ ಬಂದ ಜೆಸಿಬಿಯಿಂದ ಕೆಲಸ ನಡೆಸುತ್ತಿರುವ ಮಾಹಿತಿ ಆಧಾರದಲ್ಲಿ ಜೆಸಿಬಿ ಯೂನಿಯನ್‌ನವರು ಅಲ್ಲಿಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಆಗಮಿಸಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂದು ತಿಳಿದು ಬಂದಿದೆ.


























