ಕೆಲ ಪ್ರೇಮಿಗಳು ತಮ್ಮ ಅತಿರೇಕರದ ವರ್ತನೆ ಅಷ್ಟಿಷ್ಟಲ್ಲ. ಲೋಕದ ಪರಿಜ್ಞಾನವೇ ಇಲ್ಲದೆ ಸಾರ್ವಜನಿಕ ಸ್ಥಳ, ಬಸ್, ರೈಲು, ಮೆಟ್ರೋ ಇತ್ಯಾದಿ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡುತ್ತಾ ನಿಂತು ಬಿಡುತ್ತಾರೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದವರು ಹಲವರಿದ್ದಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗುತ್ತಿದ್ದು, ಲಜ್ಜೆಗೆಟ್ಟ ಪ್ರೇಮಿಗಳಿಬ್ಬರು ಭಯ, ನಾಚಿಕೆ ಯಾವುದೂ ಇಲ್ಲದೆ ದೈತ್ಯ ಜೇಂಟ್ ವೀಲ್ಹ್‌ನಲ್ಲಿ ಕುಳಿತು ಲೋಕದ ಪರಿಜ್ಞಾನವೇ ಇಲ್ಲದೆ ಲಿಪ್ ಲಾಕ್ ಮಾಡಿದ್ದಾರೆ. ಈ ದೃಶ್ಯವನ್ನು ಕಂಡು ಇದೆಂಥಾ ಅವಸ್ಥೆ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.
ಸಾಮಾನ್ಯವಾಗಿ ನಾವೆಲ್ಲರೂ ಮನೋರಂಜನಾ ಆಟಗಳಲ್ಲಿ ಒಂದಾಗಿರುವ ಜೇಂಟ್ ವೀಲ್ಹ್‌ನಲ್ಲಿ ಕುಳಿತುಕೊಳ್ಳಲು ಭಯ ಪಡುತ್ತೇವೆ. ಒಂದು ವೇಳೆ ಇದರಲ್ಲಿ ಕುಳಿತರೂ ಕಣ್ಣು ಮುಚ್ಚಿ ಭಯದಿಂದ ಕುಳಿತುಬಿಡುತ್ತೇವೆ. ಆದ್ರೆ ಇಲ್ಲೊಂದು ಜೋಡಿ ಮಾತ್ರ ಜೇಂಟ್ ವೀಲ್ಹ್‌ನಲ್ಲಿ ಕುಳಿತು ಯಾವುದೇ ಭಯವಿಲ್ಲದೆ ಲಿಪ್‌ಲಾಕ್ ಮಾಡಿದ್ದಾರೆ. ಅಮನ್ ರಾಜ್ (amanraj1299) ಎಂಬವರು ಈ ಕುರಿತ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜೇಂಟ್ ವೀಲ್ಹ್‌ನಲ್ಲಿ ಕುಳಿತಂಹತ ಜೊಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಂಡು ಲಿಪ್ ಲಾಕ್ ಮಾಡುವಂತಹ ದೃಶ್ಯವನ್ನು ಕಾಣಬಹುದು.
ಅಕ್ಟೋಬರ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಪ್ಪಾಗಿ ಭಾವಿಸಬೇಡಿ ಪಾಪ ಆ ಹುಡುಗಿಗೆ ತಲೆ ತಿರುಗುತ್ತಿದೆ ಎಂಬ ಕಾರಣಕ್ಕೆ ಆತ ಬಾಯಲ್ಲಿ ಬಾಯಟ್ಟು ಆಕ್ಸಿಜನ್ ನೀಡುತ್ತಿದ್ದಾನೆ ಅಷ್ಟೆʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯಯ್ಯೋ ಎಂತೆಂಥಹ ಜನರಿದ್ದಾರೆʼ ಎಂದು ಹೇಳಿದ್ದಾರೆ.