ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿಗೆ ಜನತೆಗೆ ಸ್ವಾಗತ ಕೋರಿ ಮಂಜಲ್ಪಡ್ಪು ಸುದಾನ ಶಾಲೆಯ ಬಳಿ ಮಕ್ಕಳ ಪಾದಾಚಾರಿ ಸೇತುವೆಯಲ್ಲಿ ಅಳವಡಿಸಿದ ಫಲಕಕ್ಕೆ ಹಾನಿಯುಂಟಾಗಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎದುರು ಮಕ್ಕಳಿಗಾಗಿ ಮೇಲ್ಸೇತುವೆಯಿದ್ದು ಇದರಲ್ಲಿ ಪುತ್ತೂರಿಗೆ ಬರುವ ಜನತೆಗೆ ಸ್ವಾಗತ ಕೋರಿ ಶಾಸಕ ಅಶೋಕ್ ಕುಮಾರ್ ರೈ ಅವರ ಫಲಕ ಅಳವಡಿಸಲಾಗಿತ್ತು. ಇದೀಗ ಆ ಫಲಕವನ್ನು ಹರಿದು ಹಾಕಲಾಗಿದೆ.
ಇತ್ತೀಚೆಗೆ ನಡೆದ ವಿಧಾನಪರಿಷತ್ ಉಪಚುನಾವಣೆ ಸಂದರ್ಭ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಭಾವಚಿತ್ರ ಇರುವಲ್ಲಿ ಪೇಪರ್ ಅಂಟಿಸಲಾಗಿತ್ತು. ಆದರೆ ನೀತಿ ಸಂಹಿತೆ ಬಳಿಕ ಎಲ್ಲಾ ಫಲಕಗಳನ್ನು ಯಥಾಸ್ಥಿತಿಗೆ ತರಲಾಗಿತ್ತು. ಶಾಸಕ ಅಶೋಕ್ ಕುಮಾರ್ ರೈ ಅವರ ಭಾವಚಿತ್ರ ಇರುವಲ್ಲಿ ಫಲಕ ಹರಿದು ಹೋಗಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



























