ಮಂಗಳೂರು : ಜಂಕ್ಷನ್ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಲೋಹಿತ್ ಕುಮಾರ್ ಅವರು ಅ.28ರಂದು ಸಂಜೆ ಸ್ಕೂಟರ್ ಪಾರ್ಕ್ ಮಾಡಿ ಪುತ್ತೂರಿನ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ದೂರು ನೀಡಿದ್ದಾರೆ.

























