ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆಯು ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಮುಕ್ರಂಪಾಡಿ ಸುಭದ್ರದ ಟ್ರಸ್ಟ್‌ನ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಮಹೇಂದ್ರ ವರ್ಮ ಬಜತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್ ರೈ ಕೆದಂಬಾಡಿ ಮಠ, ಕೋಶಾಧಿಕಾರಿಯಾಗಿ ಗಣೇಶ್ ಭಟ್ ಮಕರಂದ, ಕಾರ್ಯದರ್ಶಿಯಾಗಿ ರಾಜು ಶೆಟ್ಟಿ ಕೆಮ್ಮಾಯಿ, ಮಾಧ್ಯಮ ಸಂಚಾಲಕರಾಗಿ ನವೀನ್ ರೈ ಎಸ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಮಾರ್ತ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಮತ್ತು ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

























