ವಿಟ್ಲ: ಭಾರತೀಯ ಜನತಾ ಪಾರ್ಟಿ ವಿಟ್ಲ ಮುಡ್ನೂರು ಶಕ್ತಿಕೇಂದ್ರದ ಮಾಡತ್ತಡ್ಕ ವಾರ್ಡಿನಲ್ಲಿ ಇಂದು ಮಾಡತ್ತಡ್ಕ ಬೂತಿನ ಬಿಜೆಪಿ ಕಾರ್ಯಕರ್ತರು ರಸ್ತೆ ಬದಿ ತುಂಬಿದ ಹುಲ್ಲನ್ನು ತೆರವು ಗೊಳಿಸಿ ವಾಹನ ಸವಾರರ ಸಂಚಾರಕ್ಕೆ ಸುಗಮವಾಗುವಂತಹ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ವಿಟ್ಲ ಮುಡ್ನೂರು ಪಂಚಾಯತಿನ ಅಧ್ಯಕ್ಷರಾದ ಪುನೀತ್ ಮಾಡತ್ತಾರ್, ವಿಟ್ಲಮುಡ್ನೂರು ಶಕ್ತಿಕೇಂದ್ರದ ಸಂಚಾಲಕರಾದ ಯಶೋಧರ ಪಟ್ಲ , ಬೂತಿನ ಬಿಜೆಪಿ ಪ್ರಮುಖರಾದ ಶಿವಪ್ರಸಾದ್ ಮಾಡತ್ತಾರ್ , ತುವಿನ್ ಕುಮಾರ್ , ವಿನೋದ್ ನಾಯ್ಕ ಧರ್ಬೆ , ಪ್ರೇಮನಾಥ ಬೋಳಿಗದ್ದೆ , ರವಿ , ಯೋಗೀಶ ಹಾಗೂ ಶಿವಾಜಿ ಯುವಕ ಮಂಡಲ ಧರ್ಬೆಯ ಯುವಕರು ಪಾಲ್ಗೊಂಡಿದ್ದರು.