ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸಮಸ್ಯೆಗಳು ಆಗುತ್ತಲೇ ಇದೆ, ಅದರಲ್ಲೂ ಮುಖ್ಯವಾಗಿ ದಿನೆ ದಿನೆ ಬಸ್ಸುಗಳ ಸಮಸ್ಯೆ ಸುಳ್ಯ,ಹಾಗು ಕಡಬ ತಾಲೂಕಿನ ವಿವಿಧ ಭಾಗದಲ್ಲಿ ಆಗುತ್ತಿದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ತರಗತಿಗಳಿಗೆ ಸರಿಯಾದ ಸಂದರ್ಭದಲ್ಲಿ ತಲುಪಲು ಅಸಾಧ್ಯ ಹಾಗೂ ಸಂಜೆ ಮನೆಗೆ ತಲುಪುವಾಗ ತಡವಾಗುತ್ತಿದೆ, ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಹಾಗಾಗಿ ಈ ಸಮಸ್ಯೆಗಳಿಗೆ ಸರಕಾರ ಆದಷ್ಟು ಬೇಗ ಸ್ಪಂದಿಸಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕಾಗಿ ವಿನಂತಿ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ್ನು ಜೊತೆಗೂಡಿಸಿಕೊಂಡು ಬಿಜೆಪಿ ಯುವ ಮೋರ್ಚಾ ಯಾವುದೇ ಹೋರಾಟ ಗಳಿಗೂ ಸಿದ್ಧ ಎಂದು ಬಿಜೆಪಿ ಯುವ ಮೋರ್ಚ ಸುಳ್ಯ ಮಂಡಲ ತಿಳಿಸಿದೆ.