ನೆಲಮಂಗಲ: 17 ವರ್ಷದ ಬಾಲಕಿ ಮೇಲೆ ಬಲವಂತವಾಗಿ ದೈಹಿಕ ಶಿಕ್ಷಕನಿಂದ ಅತ್ಯಾಚಾರ ಎಸಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆನಲ್ಲಿ ನಡೆದಿದೆ. 22 ವರ್ಷದ ದೈಹಿಕ ಶಿಕ್ಷಕ ದಾದಾಪೀರ್ನಿಂದ ಅತ್ಯಾಚಾರ ಮಾಡಲಾಗಿದೆ. ಸಂತ್ರಸ್ತೆ ದೂರು ಆಧರಿಸಿ ದೈಹಿಕ ಶಿಕ್ಷಕನ ಬಂಧಿಸಲಾಗಿದೆ. ದಾಬಸ್ಪೇಟೆ ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ದೈಹಿಕ ಶಿಕ್ಷಕ ದಾದಾಪೀರ್ ಬಾಲಕಿಯನ್ನು ನಂಬಿಸಿ ದೇವರಾಯನ ದುರ್ಗ ಬೆಟ್ಟಕ್ಕೆ ಕರೆದೊಯ್ದಿದ್ದ. ನಂತರ ತುಮಕೂರಿಗೆ ಕರೆದೊಯ್ದು ಲಾಡ್ಜ್ವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. 10 ದಿನದ ನಂತರ ಮತ್ತೆ ಮನೆಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಬಾಯಿಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದ.