ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ (32) ಸಾವನ್ನಪ್ಪಿದ್ದಾರೆ. ಕಿರುತೆರೆ ಸ್ಟಾರ್ ನಟಿ ಹೈದರಾಬಾದ್ನಲ್ಲಿ ಸಾವಿಗೆ ಶರಣಾಗಿರೋ ಸುದ್ದಿ ಕೇಳಿ ಇಡೀ ಕಿರುತೆರೆ ಬಳಗ ಶಾಕ್ಗೆ ಒಳಗಾಗಿದೆ. ಬ್ರಹ್ಮಗಂಟು, ನಿನ್ನಿಂದಲೇ ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಶೋಭಿತಾ ಶಿವಣ್ಣ. ಅದರಲ್ಲೂ ಬ್ರಹ್ಮಗಂಟು ಸೀರಿಯಲ್ನಲ್ಲಿ ವಿಲನ್ ಶೇಡ್ನಲ್ಲಿ ನಟಿ ಶೋಭಿತಾ ಶಿವಣ್ಣ ಕಾಣಿಸಿಕೊಂಡಿದ್ದರು.
ಇನ್ನೂ, ಸ್ಟಾರ್ ನಟಿ ಶೋಭಿತಾ ಸೈಬರಾಬಾದ್ ಮೂಲದ ಸುಧೀರ್ ಎಂಬುವವರನ್ನು ಜೊತೆಗೆ ಅದ್ದೂರಿಯಾಗಿ ಮದುವೆಯಾಗಿದ್ದರು. ವಿವಾಹದ ಬಳಿಕ ನಟಿ ಶೋಭಿತಾ ಹೈದರಾಬಾದ್ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ 10 ಘಂಟೆ ಸುಮಾರಿಗೆ ನಟಿ ಶೋಭಿತಾ ಬೆಡ್ ರೂಂನ ಫ್ಯಾನಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿ ಸಾವಿನ ವಿಚಾರವನ್ನು ಶೋಭಿತಾ ಅವರ ಸಂಬಂಧಿ ವಿಜಯ್ ಎಂಬುವವರು ಗಚ್ಚಿಬೌಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಗಚ್ಚಿಬೌಲಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಅಲ್ಲದೇ ನಟಿಯ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಈ ಕೇಸ್ ಸಂಬಂಧ ಗಚ್ಚಿಬೌಲಿ ಠಾಣೆ ಇನ್ಸ್ಪೆಕ್ಟರ್ ಮಹಮ್ಮದ್ ಹಬೀಬುಲ್ಲಾ ಖಾನ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಸದ್ಯ ನಟಿಯ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಂ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ.