ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಜನಮನ್ನಣೆಯನ್ನು ಪಡೆದಿರುವ ದ್ವಾರಕಾ ವು ಡಿಸೆಂಬರ್ 5ನೇ ತಾರೀಕು ಗುರುವಾರದಂದು ತನ್ನ ವೆಬ್ಸೈಟ್ ನ್ನು ನವೀಕರಿಸಿ ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯ ಕಛೇರಿಯಲ್ಲಿ ನಡೆಯಿತು.
ವಿಟ್ಲದ ಪ್ರಸಿದ್ಧಉದ್ಯಮಿಗಳಾದ ಶ್ರೀಯುತ ಪಿ ರಾಧಾಕೃಷ್ಣ ಪೈ ಇವರು ವೆಬ್ಸೈಟ್ ಉದ್ಘಾಟನೆಗೊಳಿಸಿ ಶುಭನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದ್ವಾರಕಾ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಮುಖ್ಯಸ್ಥರಾದ ಶ್ರೀಯುತ ಪ್ರಸಾದ್ ಜಿ ಕೆ ಉಪಸ್ಥಿತರಿದ್ದು ಸಂಸ್ಥೆಗೆ ಶುಭಕೋರಿದರು.
ಪುತ್ತೂರಿನ ಖ್ಯಾತ ಉದ್ಯಮಿಗಳಾದ ಶ್ರೀಯುತ ಮಂಜುನಾಥ ನಾಯಕ್ ಮತ್ತು ಶ್ರೀಯುತ ಸಚಿನ್ ನಾಯಕ್ ಉಪಸ್ಥಿತರಿದ್ದರು.
ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಗೋಪಾಲಕೃಷ್ಣ ಭಟ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಯುತ ಅಮೃತಕೃಷ್ಣ ಹಾಗೂ ಶ್ರೀಮತಿ ಅಶ್ವಿನಿ, ಶ್ರೀಮತಿ ಅಮೃತಾ ಉಪಸ್ಥಿತರಿದ್ದರು ದುರ್ಗಾ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರೆ,ಅಮೃತಕೃಷ್ಣ ವಂದಿಸಿದರು. ಶ್ರೀಯುತ ಬಾಲಕೃಷ್ಣ ನೆಲ್ಯಾಡಿ ಮತ್ತಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.