ವಿಟ್ಲ :ನೇಪಾಳದಲ್ಲಿ ಡಿಸೆಂಬರ್ 1-2 ರಂದು ನಡೆದ ಇಂಡೋ – ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ವಿಟ್ಲ ಪದವಿಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಭಾಗವಹಿಸಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣಕರ್ತರಾಗಿರುತ್ತಾರೆ.
ವಿಟ್ಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ, ತರಬೇತುದಾರ, ರಾಷ್ಟ್ರೀಯ ಹ್ಯಾಂಡ್ ಬಾಲ್ ಆಟಗಾರ ಶ್ರೀನಿವಾಸ ಗೌಡ ಇವರು ತರಬೇತಿ ನೀಡಿದ್ದಾರೆ.
ತಂಡದಲ್ಲಿ ಆಕಾಶ್, ಜಸ್ವಂತ, ಮೋಕ್ಷಿತ್, ಸುಬ್ರಹ್ಮಣ್ಯ, ಧ್ಯಾನ್, ಮೊಹಮ್ಮದ್ ಮುಸ್ತಾಕ್, ಮೊಹಮ್ಮದ್ ರಾಝಿ, ಮನೀಶ್, ಕೀರ್ತೇಶ್, ಉತ್ತಮ್, ಶ್ರವಣ್ ರೈ, ಕಿಶನ್ ಭಾಗವಹಿಸಿದ್ದರು.
ಈ ಅಭೂತಪೂರ್ವ ಸಾಧನೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿ, ಪ್ರಾಂಶುಪಾಲರುಗಳು, ನೌಕರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.