ಪುತ್ತೂರು: ಸಿಡಿಲು ಬರುತ್ತಿದ್ದ ಸಂದರ್ಭ ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಹೋದ ವೇಳೆ ಸಿಡಿಲು ಬಡಿದ ಘಟನೆ ಬನ್ನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.
ಬನ್ನೂರು ಗ್ರಾಮ ಪಂಚಾಯತ್ ಪಿಡಿಓ ಚಿತ್ರಾವತಿ ಯವರು ಕಂಪ್ಯೂಟರ್ ಸ್ವಿಚ್ ಆಫ್ ಮಾಡುವ ಸಂದರ್ಭ ಸಿಡಿಲು ಬಡಿದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳದಲ್ಲಿದ್ದ ಸದಸ್ಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.